ಪ್ರಸ್ತುತ ದಿನಗಳಲ್ಲಿ ಮಾರಣಾಂತಿಕ ಕೊರೋನಾ ವ್ಯಾದಿಯು ಕಾಡ್ಗಿಚ್ಚಿನಂತೆ ಹರಡುತ್ತಿರುವುದರಿಂದ ಬಡವರು,ನಿರ್ಗತಿಕರು,ಬಡ ವಲಸಿಗ ಕುಟುಂಬಗಳು,ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮುಂತಾದ ಕುಟುಂಬಗಳು ಕೆಲಸವಿಲ್ಲದೆ ಆರ್ಥಿಕವಾಗಿ ಪರಿತಪಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕುಟುಂಬಗಳ ಸದಸ್ಯರಲ್ಲಿ ಕೊರೋನಾ ವ್ಯಾದಿಯು ಉಲ್ಬಣಗೊಂಡು ತುರ್ತುಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಬಡವರು ಕಷ್ಟಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಮನಗಂಡು ಹರಿಹರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯು, ಚಿತ್ರದುರ್ಗದ ಡಾನ್ ಬಾಸ್ಕೋ ಸಂಸ್ಥೆ ಹಾಗೂ ಬೆಂಗಳೂರು ರೂರಲ್ ಎಜ್ಯುಕೇಶನ್ ಮತ್ತು ಡೆವಲಪ್ ಮೆಂಟ್ ಸೊಸೈಟಿಯ ಸಹಯೋಗದೊಂದಿಗೆ ದಿನಾಂಕ 23-05-2021 ರಂದು (KA17 C8272Tempo traveller) ಆಂಬ್ಯುಲೆನ್ಸ್ ವಾಹನವನ್ನು ಇಂತಹ ಬಡವರಿಗಾಗಿ ಉಚಿತವಾಗಿ ಬಳಸಲು ತಾಲ್ಲೂಕು ಆಡಳಿತಕ್ಕೆ ಸಮರ್ಪಿಸಲಾಯ್ತು.ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್, ಹರಿಹರ ತಾಲ್ಲೂಕು ಪಂಚಾಯ್ತಿ ಎಗ್ಸಿಕ್ಯುಟಿವ್ ಆಫೀಸರ್ ಜಿ.ಡಿ.ಗಂಗಾಧರನ್ ಕಾಲೇಜಿನ ಮುಖ್ಯಸ್ಥರಾದ ಫಾ. ಎರಿಕ್ ಮಥಾಯಸ್,ಫಾ.ರಾಯಪ್ಪ, ಪ್ರಾಂಶುಪಾಲರಾದ ಸನ್ನಿಗುಡಿನ್ಹೊ, ದೈಹಿಕ ನಿರ್ದೇಶಕರಾದ ಮಂಜುನಾಥ್ ಟಿ.ಎಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
No comments:
Post a Comment