ನಮ್ಮ ಹರಿಹರ, ನಮ್ಮ ದಾವಣಗೆರೆ ಸುರಕ್ಷಿತವಾಗಿರಿಸೋಣ.
ಕೋವಿಡ್-19ವಿರುದ್ಧದ ಹೋರಾಟದಲ್ಲಿ ಸಂತ ಅಲೋಶಿಯಸ್ ಕಾಲೇಜು ನಿಮ್ಮ ಜೊತೆ.
ಹರಿಹರ :ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನಾ ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು,ನಮ್ಮ ಕರ್ನಾಟಕವೂ ಇದರಿಂದ ಅಕ್ಷರಶಃ ನಲುಗಿಹೋಗಿದೆ.ಅಪಾರ ಸಾವು ನೋವುಗಳು ದಿನೇದಿನೇ ಸಂಭವಿಸುತ್ತಿದ್ದು ಇದರ ವಿರುದ್ಧ ಸಮರೋಪಾದಿಯಲ್ಲಿ ಹೋರಾಡಬೇಕಿದೆ.ಈ ನಿಟ್ಟಿನಲ್ಲಿ ನಮ್ಮ ಹರಿಹರ ನಮ್ಮ ದಾವಣಗೆರೆಯನ್ನು ಈ ಸಾಂಕ್ರಾಮಿಕ ಪಿಡುಗಿನಿಂದ ಸುರಕ್ಷಿತವಾಗಿರಿಸುವುದಕ್ಕಾಗಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ ಜನರಿಗಾಗಿ ತನ್ನ ಮಾನವೀಯ ಸೇವೆಯನ್ನು ನೀಡಲು ಸಿದ್ಧವಾಗಿದೆ.ಈಗಾಗಲೇ "ಸ್ಪಂದನ" ಶೀರ್ಷಿಕೆಯಡಿಯಲ್ಲಿ
24X7 ಸನ್ನದ್ಧ ತಂಡ ಕಾರ್ಯಾಚರಿಸುತ್ತಿದ್ದು ಸಹಾಯವಾಣಿಯನ್ನು ತೆರೆದಿದೆ.
ನಮ್ಮಲ್ಲಿ ಲಭ್ಯವಿರುವ ಸೇವೆಗಳು :
1.ಹರಿಹರ- ದಾವಣಗೆರೆ ಆಸುಪಾಸಿನ ಜನರಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ.
2.ಆಪ್ತ ಸಮಾಲೋಚನೆ (ಕೌನ್ಸೆಲಿಂಗ್)
3.ಆಧ್ಯಾತ್ಮಿಕ ಹಾಗೂ ನೈತಿಕ ಬೆಂಬಲ
4. ಮಾಸ್ಕ್ ವಿತರಣೆ
5.ಕೊರೋನಾ ವಾರಿಯರ್ಸ್ ಗಳಾದ *ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರಿಗೆ ಆಹಾರ ವಿತರಣೆ.
6.ಕಡುಬಡವರು, ನಿರ್ಗತಿಕರು, ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ಸಾಮಗ್ರಿಗಳ ವಿತರಣೆ.
"ನಿಮ್ಮ ಸ್ಪಂದನವೇ ನಮ್ಮ ಇಂಧನ"
ಸಹಾಯಕ್ಕಾಗಿ ಸಂಪರ್ಕಿಸಿ:
7338655141,9901189201
9036486863,9449625563
No comments:
Post a Comment