ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ.
ಕೊರೋನಾ ಸಂಕಷ್ಟದ ಸಮಯದಲ್ಲಿ ಎಚ್. ಐ.ವಿ ಪೀಡಿತರಿಗೆ ಆಹಾರ ಕಿಟ್ ವಿತರಣೆ.
ಹರಿಹರ : ಕರ್ನಾಟಕ ರಾಜ್ಯದೆಲ್ಲೆಡೆ ಕೊರೊನಾ ಮಹಾಮಾರಿ ಅವ್ಯಾಹತವಾಗಿ ಹರಡುತ್ತಿದ್ದು ಅಪಾರ ಸಾವು ನೋವುಗಳು ಸಂಭವಿಸುತ್ತಿವೆ.ಈ ಸಲುವಾಗಿ ಸರಕಾರ ಈಗಾಗಲೇ ಲಾಕ್ ಡೌನ್ ಘೋಷಿಸಿದ್ದು ಇದರಿಂದಾಗಿ ಅಶಕ್ತರು, ಬಡವರು, ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದ್ದು ಆಹಾರಕ್ಕಾಗಿ ಪರಿತಪಿಸುವಂತಾಗಿದೆ.ಈ ನಿಟ್ಟಿನಲ್ಲಿ "ಶಿಕ್ಷಣದೊಂದಿಗೆ ಸೇವೆ" ಎಂಬ ಧ್ಯೇಯೋದ್ದೇಶವನ್ನು ಹೊಂದಿರುವ ನಮ್ಮ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ,ಕರ್ನಾಟಕ ಹೆಲ್ಪ್ ಪ್ರಮೋಷನ್ ಟ್ರಸ್ಟ್ ಹಾಗೂ ಕರ್ನಾಟಕ ಏಡ್ಸ್ ಪ್ರಾವಿಜನ್ ಸೊಸೈಟಿ ಇದರ ಸಂಯುಕ್ತ ಆಶ್ರಯದಲ್ಲಿ
ದಿನಾಂಕ: 06-05-2021ರಂದು ದಾವಣಗೆರೆಯ
ಕೆ.ಎಸ್ ಡಿ.ಎಸ್ ಕಚೇರಿಯಲ್ಲಿ ಸುಮಾರು 25ಕ್ಕೂ ಹೆಚ್ಚು
ಎಚ್ಐವಿ ಪಾಸಿಟಿವ್ ಪೀಡಿತರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥರಾದ ಫಾದರ್ ಎರಿಕ್ ಮಥಾಯಸ್ ಎಸ್ .ಜೆ, ಪ್ರಾಂಶುಪಾಲರಾದ ಶ್ರೀ ಸನ್ನಿ ಗುಡಿನೊ,ಸಂಯೋಜಕರಾದ ವಿಲಿಷ ಡಿಸೋಜ ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
https://public.app/video/sp_3k0gl9qqvid4h
No comments:
Post a Comment