ದಾವಣಗೆರೆ,ಮೇ 31.www.truemediakannada.in,ಹರಿಹರ, ಕೊರೋನಾ ದಿನೆದಿನೆ ವ್ಯಾಪಕವಾಗಿ ಹರಡುತ್ತಿದೆ, ಆಶಾ ಕಾರ್ಯಕರ್ತರು ಹಗಲು ಇರುಳು ತಮ್ಮ ಜೀವ ಬದಿಗೊತ್ತಿ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡು ಈ ಒಂದು ಕರೋನ ವೈರಸ್ ವಿರುದ್ಧ ಹೋರಾಡಲು ಮುಂಚೂಣಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅಂತಹ ಆಶಾ ಕಾರ್ಯಕರ್ತರಿಗೆ ಇಂದು ಹರಿಹರದ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು ವತಿಯಿಂದ ದಿನಾಂಕ 31-05-2021 ರಂದು ಕಾಲೇಜಿನ ಮುಖ್ಯಸ್ಥರಾದ ಫಾ. ಎರಿಕ್ ಮಥಾಯಸ್ ರವರ ಮಾರ್ಗದರ್ಶನದಲ್ಲಿ ಹರಿಹರದ ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ವರ್ಗ ಮತ್ತು ಆಶಾ ಕಾರ್ಯಕರ್ತರಿಗೆ 25 ಆಹಾರ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಯಿತು. ಸಿಬ್ಬಂದಿ ಒಬ್ಬರು ಮಾತನಾಡಿ ದಿನಸಿ ಕಿಟ್ ಗಳನ್ನು ನೀಡುವ ಮೂಲಕ ಸಂತ ಅಲೋಶಿಯಸ್ ಕಾಲೇಜು ಸಿಬ್ಬಂದಿಯು ತನ್ನ ಮಾನವೀಯತೆಯನ್ನು ಮೆರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ,ವಿವಿಧ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಜೊತೆ ಹೀಗೆ ಕೈಜೋಡಿಸಿದರೆ ಕೊರೋನವನ್ನು ಸುಲಭವಾಗಿ ಮಣಿಸಬಹುದು ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಚಂದ್ರಮೋಹನ್ ಎಂದು ಅಭಿಪ್ರಾಯಪಟ್ಟರು. ನಮ್ಮ ಸಿಬ್ಬಂದಿಗಳಿಗೆ ದಿನಸಿ ಕಿಟ್ ಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಆಹಾರ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸನ್ನಿ ಗುಡಿನ್ಹೊ, ,ಮಂಜುನಾಥ್ ಟಿಎಸ್, ಫರ್ನಾಂಡಿಸ್ ಉಪಸ್ಥಿತರಿದ್ದರು.
No comments:
Post a Comment