Harihar, 4 June 2021: Please click the link to see the News Report
ಶಾಂತಿ,ಸಹಕಾರ ಸಹಬಾಳ್ವೆ,ತ್ಯಾಗ,ದಾನ ಗುಣಗಳಿಗೆ ಹೆಸರಾದ ನಮ್ಮ ಕನ್ನಡನಾಡಿನಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ಧತೆಯಿಂದ ಬಾಳಬೇಕು ಎಂದು ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ ನರಸಿಂಹ ಪಿ.ತಾಮ್ರಧ್ವಜ್ ಕಿವಿಮಾತು ಹೇಳಿದರು. ಹರಿಹರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಹರಿಹರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವತಿಯಿಂದ ನೀಡಲ್ಪಟ್ಟ 150 ದಿನಸಿ ಸಾಮಗ್ರಿ ಕಿಟ್ ಗಳನ್ನು ಆಟೋ ಚಾಲಕರಿಗೆ ವಿತರಿಸಿದರು, ಅವರನ್ನುದ್ದೇಶಿಸಿ ಮಾತನಾಡುತ್ತ,ಆಟೋ ಚಾಲಕರು ನಗರದಲ್ಲಿ ಸಂಚರಿಸುವ ಗರ್ಭಿಣಿ ಹಾಗೂ ಬಾಣಂತಿಯರು ಮುಂತಾದ ಅಶಕ್ತರಿಗೆ ಆಪತ್ಕಾಲದಲ್ಲಿ ಉಚಿತ ಸೇವೆಯನ್ನು ಒದಗಿಸುವ ಮೂಲಕ ಮಾನವೀಯತೆಯನ್ನು ತೋರಿಸಬೇಕೆಂದು ಕರೆನೀಡಿದರು.
No comments:
Post a Comment