WELCOME TO OUR BLOG SPANDANA. THIS BLOG DOCUMENTS THE ACTIVITIES RELATED TO THE RELIEF WORK AT THE WAKE OF 2ND WAVE OF CORONA INFECTION CONDUCTED BY THE JESUITS AND THEIR PARTNERS IN THOSE PLACES WHERE JESUITS ARE PHYSICALLY PRESENT WITHIN THE TERRITORY OF KARNATAKA. WE FIRMLY BELIEVE IN THE WORDS OF JESUS CHRIST: "HEAL THE SICK, RAISE THE DEAD, CLEANSE THOSE WHO HAVE LEPROSY, DRIVE OUT DEMONS. FREELY YOU HAVE RECEIVED; FREELY GIVE" (MATHEW 10:8).

Showing posts with label Harihar. Show all posts
Showing posts with label Harihar. Show all posts

Tuesday 25 May 2021

Harihar News Reports on Covid Relief Work

Please find attached in pdf format the reports published in various news outlets regarding the Covid Relief Work rendered by St Aloysius College, Harihar under the leadership of Fr Eric Mathias, SJ

ONLINE WEBSITE REPORTS
Davanagere: St Aloysius PU College Harihar donates ambulance to taluk health officials (Reported on 25 May 2021) Courtesy: https://www.daijiworld.com/ 

Davanagere: St Aloysius PU College Harihar holds food kit distribution drive  (Reported on 28 May 2021) Courtesy: https://www.daijiworld.com/ 

Donation of Ambulance and Food Kit Distribution Drive by Harihar St Aloysius PUC (Reported on 26 May 2021) Courtesy: https://www.mangalorean.com/

Monday 24 May 2021

ಹರಿಹರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಿಂದ ಆಂಬ್ಯುಲೆನ್ಸ್ ವಾಹನ ಸಮರ್ಪಣೆ

ಪ್ರಸ್ತುತ ದಿನಗಳಲ್ಲಿ ಮಾರಣಾಂತಿಕ ಕೊರೋನಾ ವ್ಯಾದಿಯು ಕಾಡ್ಗಿಚ್ಚಿನಂತೆ ಹರಡುತ್ತಿರುವುದರಿಂದ ಬಡವರು,ನಿರ್ಗತಿಕರು,ಬಡ ವಲಸಿಗ ಕುಟುಂಬಗಳು,ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮುಂತಾದ ಕುಟುಂಬಗಳು ಕೆಲಸವಿಲ್ಲದೆ ಆರ್ಥಿಕವಾಗಿ ಪರಿತಪಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕುಟುಂಬಗಳ ಸದಸ್ಯರಲ್ಲಿ ಕೊರೋನಾ ವ್ಯಾದಿಯು ಉಲ್ಬಣಗೊಂಡು ತುರ್ತುಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಬಡವರು ಕಷ್ಟಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಮನಗಂಡು ಹರಿಹರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯು, ಚಿತ್ರದುರ್ಗದ ಡಾನ್ ಬಾಸ್ಕೋ ಸಂಸ್ಥೆ ಹಾಗೂ ಬೆಂಗಳೂರು ರೂರಲ್ ಎಜ್ಯುಕೇಶನ್ ಮತ್ತು ಡೆವಲಪ್ ಮೆಂಟ್ ಸೊಸೈಟಿಯ ಸಹಯೋಗದೊಂದಿಗೆ ದಿನಾಂಕ 23-05-2021 ರಂದು (KA17 C8272Tempo traveller) ಆಂಬ್ಯುಲೆನ್ಸ್ ವಾಹನವನ್ನು ಇಂತಹ ಬಡವರಿಗಾಗಿ ಉಚಿತವಾಗಿ ಬಳಸಲು ತಾಲ್ಲೂಕು ಆಡಳಿತಕ್ಕೆ ಸಮರ್ಪಿಸಲಾಯ್ತು.ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ  ಡಾ. ಚಂದ್ರಮೋಹನ್, ಹರಿಹರ ತಾಲ್ಲೂಕು ಪಂಚಾಯ್ತಿ ಎಗ್ಸಿಕ್ಯುಟಿವ್ ಆಫೀಸರ್ ಜಿ.ಡಿ.ಗಂಗಾಧರನ್ ಕಾಲೇಜಿನ ಮುಖ್ಯಸ್ಥರಾದ ಫಾ. ಎರಿಕ್ ಮಥಾಯಸ್,ಫಾ.ರಾಯಪ್ಪ,  ಪ್ರಾಂಶುಪಾಲರಾದ ಸನ್ನಿಗುಡಿನ್ಹೊ, ದೈಹಿಕ ನಿರ್ದೇಶಕರಾದ ಮಂಜುನಾಥ್ ಟಿ.ಎಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Monday 17 May 2021

Ambulance Service in Harihar by the Covid Relief Service Team

 Harihar, May 16, 2021: An ambulance has been put into service by the Covid Relief Service of the St Aloysius PU College, Harihar. 







Sunday 16 May 2021

Distribution of Food Kits to the Migrants in Harihar

 Harihar, 15 May 2021: St Aloysius PU College, Harihar, under the leadership of Fr Eric Mathias, SJ continued to do the relief work at the second wave of Corona lockdown. They specifically targeted the migrant families who are settled in Harihar. Here below is a photo report.









Friday 14 May 2021

Harihar SJ Relief Work in Print Media

 





ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ.

 ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ. 

 ಕೊರೋನಾ ಸಂಕಷ್ಟದ ಸಮಯದಲ್ಲಿ ಎಚ್. ಐ.ವಿ ಪೀಡಿತರಿಗೆ ಆಹಾರ ಕಿಟ್ ವಿತರಣೆ. 

 ಹರಿಹರ : ಕರ್ನಾಟಕ ರಾಜ್ಯದೆಲ್ಲೆಡೆ ಕೊರೊನಾ ಮಹಾಮಾರಿ  ಅವ್ಯಾಹತವಾಗಿ ಹರಡುತ್ತಿದ್ದು ಅಪಾರ ಸಾವು ನೋವುಗಳು ಸಂಭವಿಸುತ್ತಿವೆ.ಈ ಸಲುವಾಗಿ ಸರಕಾರ ಈಗಾಗಲೇ ಲಾಕ್‌  ಡೌನ್ ಘೋಷಿಸಿದ್ದು  ಇದರಿಂದಾಗಿ ಅಶಕ್ತರು, ಬಡವರು, ಕೂಲಿ  ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದ್ದು  ಆಹಾರಕ್ಕಾಗಿ ಪರಿತಪಿಸುವಂತಾಗಿದೆ.ಈ ನಿಟ್ಟಿನಲ್ಲಿ "ಶಿಕ್ಷಣದೊಂದಿಗೆ ಸೇವೆ" ಎಂಬ ಧ್ಯೇಯೋದ್ದೇಶವನ್ನು ಹೊಂದಿರುವ ನಮ್ಮ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ,ಕರ್ನಾಟಕ ಹೆಲ್ಪ್  ಪ್ರಮೋಷನ್ ಟ್ರಸ್ಟ್ ಹಾಗೂ ಕರ್ನಾಟಕ ಏಡ್ಸ್ ಪ್ರಾವಿಜನ್ ಸೊಸೈಟಿ ಇದರ ಸಂಯುಕ್ತ ಆಶ್ರಯದಲ್ಲಿ 

ದಿನಾಂಕ: 06-05-2021ರಂದು ದಾವಣಗೆರೆಯ

 ಕೆ.ಎಸ್ ಡಿ.ಎಸ್ ಕಚೇರಿಯಲ್ಲಿ  ಸುಮಾರು 25ಕ್ಕೂ ಹೆಚ್ಚು

 ಎಚ್ಐವಿ ಪಾಸಿಟಿವ್    ಪೀಡಿತರಿಗೆ  ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥರಾದ  ಫಾದರ್ ಎರಿಕ್ ಮಥಾಯಸ್ ಎಸ್ .ಜೆ, ಪ್ರಾಂಶುಪಾಲರಾದ  ಶ್ರೀ ಸನ್ನಿ ಗುಡಿನೊ,ಸಂಯೋಜಕರಾದ ವಿಲಿಷ ಡಿಸೋಜ ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

https://public.app/video/sp_3k0gl9qqvid4h

ನಮ್ಮ ಹರಿಹರ, ನಮ್ಮ ದಾವಣಗೆರೆ ಸುರಕ್ಷಿತವಾಗಿರಿಸೋಣ.

ನಮ್ಮ ಹರಿಹರ, ನಮ್ಮ ದಾವಣಗೆರೆ ಸುರಕ್ಷಿತವಾಗಿರಿಸೋಣ.

ಕೋವಿಡ್-19ವಿರುದ್ಧದ ಹೋರಾಟದಲ್ಲಿ ಸಂತ ಅಲೋಶಿಯಸ್ ಕಾಲೇಜು ನಿಮ್ಮ ಜೊತೆ.

ಹರಿಹರ :ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನಾ ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು,ನಮ್ಮ ಕರ್ನಾಟಕವೂ ಇದರಿಂದ ಅಕ್ಷರಶಃ ನಲುಗಿಹೋಗಿದೆ.ಅಪಾರ ಸಾವು ನೋವುಗಳು ದಿನೇದಿನೇ ಸಂಭವಿಸುತ್ತಿದ್ದು ಇದರ ವಿರುದ್ಧ ಸಮರೋಪಾದಿಯಲ್ಲಿ ಹೋರಾಡಬೇಕಿದೆ.ಈ ನಿಟ್ಟಿನಲ್ಲಿ ನಮ್ಮ ಹರಿಹರ ನಮ್ಮ ದಾವಣಗೆರೆಯನ್ನು ಈ ಸಾಂಕ್ರಾಮಿಕ ಪಿಡುಗಿನಿಂದ ಸುರಕ್ಷಿತವಾಗಿರಿಸುವುದಕ್ಕಾಗಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ  ಜನರಿಗಾಗಿ ತನ್ನ ಮಾನವೀಯ ಸೇವೆಯನ್ನು ನೀಡಲು ಸಿದ್ಧವಾಗಿದೆ.ಈಗಾಗಲೇ "ಸ್ಪಂದನ" ಶೀರ್ಷಿಕೆಯಡಿಯಲ್ಲಿ 

24X7 ಸನ್ನದ್ಧ ತಂಡ ಕಾರ್ಯಾಚರಿಸುತ್ತಿದ್ದು ಸಹಾಯವಾಣಿಯನ್ನು ತೆರೆದಿದೆ.

ನಮ್ಮಲ್ಲಿ ಲಭ್ಯವಿರುವ ಸೇವೆಗಳು :

1.ಹರಿಹರ- ದಾವಣಗೆರೆ ಆಸುಪಾಸಿನ ಜನರಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ.

2.ಆಪ್ತ ಸಮಾಲೋಚನೆ (ಕೌನ್ಸೆಲಿಂಗ್)

3.ಆಧ್ಯಾತ್ಮಿಕ ಹಾಗೂ ನೈತಿಕ ಬೆಂಬಲ 

4. ಮಾಸ್ಕ್ ವಿತರಣೆ 

5.ಕೊರೋನಾ ವಾರಿಯರ್ಸ್ ಗಳಾದ  *ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರಿಗೆ ಆಹಾರ ವಿತರಣೆ.

6.ಕಡುಬಡವರು, ನಿರ್ಗತಿಕರು, ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ಸಾಮಗ್ರಿಗಳ  ವಿತರಣೆ.

"ನಿಮ್ಮ ಸ್ಪಂದನವೇ ನಮ್ಮ ಇಂಧನ"

ಸಹಾಯಕ್ಕಾಗಿ ಸಂಪರ್ಕಿಸಿ:

7338655141,9901189201

9036486863,9449625563